UC News

HONOR 9X ಮತ್ತು Samsung M30s ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಸರಿಯಾದ ಆಯ್ಕೆ?

HONOR 9X ಮತ್ತು Samsung M30s ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಸರಿಯಾದ ಆಯ್ಕೆ?

ಈ ಹೊಸ ವರ್ಷ ಮತ್ತು ಹೊಸ ದಶಕವನ್ನು ಪ್ರತಿಯೊಬ್ಬರೂ ಹೊಸ ಮತ್ತು ಉತ್ತಮ ಫೋನ್‌ನೊಂದಿಗೆ ಪ್ರಾರಂಭಿಸುತ್ತಿದ್ದಾರೆ. ಕಳೆದ ಒಂದು ದಶಕದಲ್ಲಿ ಎಲ್ಲಾ ಬ್ರ್ಯಾಂಡ್‌ಗಳು ತಾಂತ್ರಿಕ ಅಭಿವೃದ್ಧಿಗೆ ಹೇಗೆ ಕೊಡುಗೆ ನೀಡಿವೆ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಇದೇ ದಶಕದಲ್ಲಿ TechChic (ತಂತ್ರಜ್ಞಾನ ಮಾಹಿತಿ) ಬ್ರ್ಯಾಂಡ್‌ ರೂಪದಲ್ಲಿ HONOR ಸಂಸ್ಥೆ ಮಾರುಕಟ್ಟೆಯಲ್ಲಿ ದೊಡ್ಡ ಹೆಸರನ್ನು ಗಳಿಸಿದೆ. ಈ ಹೊಸ ದಶಕದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸ್ಪರ್ಧೆಯು ಇನ್ನಷ್ಟು ಏರಲಿದೆ. ಇದರ ಅರ್ಥ ಬಳಕೆದಾರರು ಮುಂಬರುವ ಸಮಯದಲ್ಲಿ ಹೆಚ್ಚಿನ ಹೊಸ ವೈಶಿಷ್ಟ್ಯಗಳನ್ನು ನೋಡಲಿದ್ದಾರೆ.

ಸ್ಪರ್ಧೆಯ ಕುರಿತು ಹೇಳುವುದಾದರೆ, ಸ್ಮಾರ್ಟ್‌ಫೋನ್ ಮಾರುಕಟ್ಟೆಯ ಬಜೆಟ್ ಫೋನ್ ವಿಭಾಗದಲ್ಲಿ ಇತ್ತೀಚೆಗೆ ಬಿಡುಗಡೆಯಾದ HONOR ನ 9X, Samsung M30s ಗೆ ಕಠಿಣ ಸ್ಪರ್ಧೆಯನ್ನು ನೀಡುತ್ತಿದೆ.

ಈ ಎರಡೂ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮವಾಗಿದ್ದು, ಜನರಿಗೆ ಕೈಗೆಟುಕುವಂತಿರುವುದು ಸಾಬೀತಾಗಿದೆ. ಆಕರ್ಷಕ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ನೀಡುತ್ತಿರುವ HONOR 9X ಅನ್ನು ಈಗಿನಿಂದಲೇ ಜನರು ಮೆಚ್ಚಲು ಆರಂಭಿಸಿದ್ದಾರೆ. ಆದರೆ HONOR 9X ಮತ್ತು Samsung M30s ಗಳಲ್ಲಿ ಯಾವುದು ಉತ್ತಮ ಆಯ್ಕೆ ಎಂಬುದೇ ಪ್ರತಿಯೊಬ್ಬರ ಪ್ರಶ್ನೆಯಾಗಿದೆ.

ಡಿಸೈನ್ ಮತ್ತು ಡಿಸ್​ಪ್ಲೇ: HONOR 9X 3D ಕರ್ವ್ಡ್ ಪ್ಯಾಟರ್ನ್‌ನೊಂದಿಗೆ ಬರುತ್ತದೆ ಮತ್ತು ಅದರ ಗ್ಲಾಸೀ ಫಿನಿಷ್​‍ನಿಂದಾಗಿ, ಈ ಫೋನ್ ಉತ್ತಮ ಪ್ರೀಮಿಯಂ ಲುಕ್ ನೀಡುತ್ತದೆ. ಇದಲ್ಲದೆ, ಫೋನ್‌ನ ಬ್ಯಾಕ್ ಪ್ಯಾನಲ್‌ನಲ್ಲಿ ನೀವು ಕಾಣುವ X ಆಕಾರದ ವಿನ್ಯಾಸವು ಈ ಮೋಡಲ್ ಅನ್ನು ಬೇರೆಯದರಿಂದ ಭಿನ್ನವಾಗಿ ಕಾಣುವಂತೆ ಮಾಡುತ್ತದೆ. ಮತ್ತೊಂದೆಡೆ, Samsung M30s ವಿನ್ಯಾಸವು Samsung Galaxy M10 ಮತ್ತು M20 ಗೆ ಹೋಲುತ್ತದೆ. HONOR 9X, 6.59' ಗಾತ್ರದೊಂದಿಗೆ FHD + ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರ ಹೋಲಿಕೆಯಲ್ಲಿ Samsung M30, 6.4' U drop, FHD+ sAMOLED ಡಿಸ್ಪ್ಲೇ ಹೊಂದಿದೆ. ಇದಲ್ಲದೆ, HONOR 9X, 91% ಸ್ಕ್ರೀನ್ ರೇಶಿಯೋ ನೀಡುತ್ತದೆ ಮತ್ತು Samsung M30 ಯಲ್ಲಿ ನೀವು 91.4% ಸ್ಕ್ರೀನ್ ರೇಶಿಯೋವನ್ನು ಪಡೆಯುತ್ತೀರಿ. Type-c ಚಾರ್ಜಿಂಗ್‌ನೊಂದಿಗೆ ಫಿಂಗರ್ ಪ್ರಿಂಟ್ ಅನ್‌ಲಾಕ್‌ ವೈಶಿಷ್ಟ್ಯವನ್ನು ಎರಡೂ ಫೋನ್‌ಗಳಲ್ಲಿ ಒದಗಿಸಲಾಗಿದೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಡಿಸೈನ್ ಮತ್ತು ಡಿಸ್ಪ್ಲೇ ವಿಷಯದಲ್ಲಿ HONOR 9X ಒಂದು ಕೈ ಮೀರಿಸಿದೆ.

ಕ್ಯಾಮೆರಾ:

ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ, ಯಾವುದೇ ಕ್ಯಾಮೆರಾವನ್ನು ಖರೀದಿಸುವ ಮೊದಲು ಅದರ ಕ್ಯಾಮೆರಾವನ್ನು ಮೊದಲು ನೋಡಲಾಗುತ್ತದೆ. HONOR 9X ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಇದ್ದು, 48MP ಮೈನ್ ಕ್ಯಾಮೆರಾ, 120 ಡಿಗ್ರಿ ವ್ಯೂ ನೀಡುವ 8MP ಸೂಪರ್ ವೈಡ್ ಆಯಂಗಲ್ ಲೆನ್ಸ್ ಮತ್ತು 2MP ಡೆಪ್ತ್ ಕ್ಯಾಮೆರಾ ಹೊಂದಿದೆ. ಮುಂಭಾಗದ ಕ್ಯಾಮೆರಾದ ಬಗ್ಗೆ ಹೇಳುವುದಾದರೆ, ಇದು 16 MP ಪಾಪ್-ಅಪ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ, ಇದು ಸಾಫ್ಟ್ ಲೈಟ್, ಬಟರ್‌ಫ್ಲೈ ಲೈಟ್, ಸ್ಕೇಟೆಡ್ ಲೈಟ್‌ನಂತಹ 8 ವಿಭಿನ್ನ ಮೋಡ್‌ಗಳನ್ನು ಬೆಂಬಲಿಸುತ್ತದೆ. ಈ ಬೆಲೆ ವ್ಯಾಪ್ತಿಯಲ್ಲಿ HONOR 9X ನಲ್ಲಿ ಮಾತ್ರ ನೀವು ಪಾಪ್-ಅಪ್ ಕ್ಯಾಮೆರಾವನ್ನು ಪಡೆಯುತ್ತೀರಿ. ಇದಲ್ಲದೆ, ಈ ಪಾಪ್-ಅಪ್ ಕ್ಯಾಮೆರಾ ಇಂಟೆಲಿಜೆಂಟ್ ಫಾಲ್ ಡಿಟೆಕ್ಷನ್, ಡೌನ್‌ವರ್ಡ್ ಪ್ರೆಶರ್ ಪ್ರೊಟೆಕ್ಷನ್ ಮತ್ತು ಡಸ್ಟ್ ಮತ್ತು ಸ್ಪ್ಲಾಶ್ ಪ್ರೊಟೆಕ್ಷನ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಆದರೆ, Samsung M30 48MP+8MP+5MP ಟ್ರಿಪಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರೊಂದಿಗೆ ನೀವು ಹೆಚ್ಚಿನ ವಿವರಗಳುಳ್ಳ ಫೋಟೋಗಳನ್ನು ತೆಗೆದುಕೊಳ್ಳಬಹುದು ಆದರೆ ಇದು ಪಾಪ್-ಅಪ್ ಸೆಲ್ಫಿ ವೈಶಿಷ್ಟ್ಯವನ್ನು ನೀಡುವುದಿಲ್ಲ. ಕ್ಯಾಮೆರಾದ ವಿಷಯದಲ್ಲಿ, HONOR 9X ತನ್ನ ಪಾಪ್ ಅಪ್ ಸೆಲ್ಫಿ ವೈಶಿಷ್ಟ್ಯದಿಂದಾಗಿ Samsung M30s ನ್ನು ಹಿಂದಿಕ್ಕಿದೆ.

ಸಾಮರ್ಥ್ಯ:ಎರಡೂ ಸ್ಮಾರ್ಟ್‌ಫೋನ್‌ಗಳು Android 9.0 OS ನೊಂದಿಗೆ ಬರುತ್ತವೆ. ಅತ್ಯುತ್ತಮ Kirin 710 F ಆಕ್ಟಾ ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವುದರಿಂದ HONOR 9X ಫೋನ್‌ನ ಕಾರ್ಯನಿರ್ವಹಣೆ ಸಾಕಷ್ಟು ಸ್ಮೂತ್ ಆಗಿದೆ. ಮತ್ತೊಂದೆಡೆ, Samsung M30s Exynos 9611 ಪ್ರೊಸೆಸರ್ ಹೊಂದಿದೆ. HONOR 9X ನಲ್ಲಿ Kirin 710 F ಆಕ್ಟಾ ಕೋರ್ ಪ್ರೊಸೆಸರ್ ಇರುವ ಕಾರಣ. Samsung M30s ಗಿಂತ ಹೆಚ್ಚು ವೇಗವಾಗಿ ಹಲವು ಕಾರ್ಯಗಳನ್ನು ನಿರ್ವಹಿಸಬಲ್ಲದು ಮತ್ತು ಈ ಫೋನ್‌ನಲ್ಲಿ ನೀವು ಯಾವುದೇ ವಿಳಂಬವಿಲ್ಲದೆ ಹೈ-ಗ್ರಾಫಿಕ್ಸ್ ಆಟಗಳನ್ನು ಆಡಬಹುದು. ಈ ಎರಡೂ ಮಾಡೆಲ್‌ಗಳು 4/6 GB RAM ನೊಂದಿಗೆ 128 GB ಇಂಟರ್ನಲ್ ಸ್ಟೋರೇಜ್ ವೇರಿಯೆಂಟ್ ಲಭ್ಯವಿದೆ. ಎರಡೂ ಫೋನ್‌ಗಳ ಬ್ಯಾಟರಿ ಬಾಳಿಕೆ ಕೂಡ ಬಹಳ ಉತ್ತಮವಾಗಿದೆ. ವೇಗದ ಚಾರ್ಜಿಂಗ್ ವೈಶಿಷ್ಟ್ಯದಿಂದಾಗಿ, ನೀವು ನಿಮ್ಮ ಫೋನ್ ಅನ್ನು ಬಹಳ ಕಡಿಮೆ ಸಮಯದಲ್ಲಿ ಚಾರ್ಜ್ ಮಾಡಬಹುದು ಮತ್ತು ಅದನ್ನು ದೀರ್ಘಕಾಲದವರೆಗೆ ಬಳಸಬಹುದು. ಆದರೆ ತನ್ನ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿರುವ, Kirin 710 F ಪ್ರೊಸೆಸರ್ ಕಾರಣದಿಂದಾಗಿ, HONOR 9X ಕಾರ್ಯಕ್ಷಮತೆಯ ದೃಷ್ಟಿಯಿಂದ Samsung ನ್ನು ಮೀರಿಸುತ್ತದೆ.

ಬೆಲೆ:

ಮೇಲಿನ ಮಾಹಿತಿಯ ನಂತರ, ವೈಶಿಷ್ಟ್ಯಗಳ ವಿಷಯದಲ್ಲಿ Samsung M30s ಗಿಂತಲೂ HONOR 9X ಉತ್ತಮವಾಗಿದೆ ಎಂಬುದು ಖಚಿತ. ಆದ್ದರಿಂದ ಬನ್ನಿ ಈ ಎರಡರ ಬೆಲೆಗಳ ಮೇಲೆಯೂ ಒಮ್ಮೆ ದೃಷ್ಟಿ ಹರಿಸೋಣ. HONOR 9X ನ 4GB-128GB ವೇರಿಯೆಂಟ್ ಬೆಲೆ ರೂ.13,999 ,ಆದರೆ ಜನವರಿ 19 ರಿಂದ ಜನವರಿ 22 ರವರೆಗೆ ನಡೆಯುವ ಆಫರ್‌ನ ಮೊದಲ ದಿನ ರೂ.1,000 ರಿಯಾಯಿತಿಯೊಂದಿಗೆ ರೂ.12,999 ಕ್ಕೆ ಲಭ್ಯವಿದೆ. ಇದರೊಂದಿಗೆ, ಜನವರಿ 19 ರಿಂದ ಜನವರಿ 22 ರವರೆಗೆ ICICI Bank ಕ್ರೆಡಿಟ್ ಕಾರ್ಡ್ ಮತ್ತು Kotak Bank ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಈ ಮಾಡೆಲ್ ಖರೀದಿಸಿದಲ್ಲಿ 10% ತ್ವರಿತ ರಿಯಾಯಿತಿ ನೀಡಲಾಗುತ್ತದೆ. ಅಲ್ಲದೆ, ಆಫರ್ ಸಮಯದಲ್ಲಿ ನೀವು ಖರೀದಿಯ ಜೊತೆ ರೂ. 2,200 ಗಳ ಜಿಯೋ ರೀಚಾರ್ಜ್ ವೋಚರ್ ಸಹ ಪಡೆಯುತ್ತೀರಿ, ಇದನ್ನು ನೀವು ಪ್ರತೀ ರೂ.50 ರಂತೆ 44 ರೀಚಾರ್ಜ್​ಗಳಾಗಿ ಬಳಸಬಹುದು. ಅದೇ ಸಮಯದಲ್ಲಿ, 6GB+128GB ಸ್ಟೋರೇಜ್ ವೇರಿಯೆಂಟ್‌ ಬೆಲೆ ರೂ.16,999 ಆದರೆ ಬ್ಯಾಂಕ್ ಆಫರ್‌ನ ಲಾಭವನ್ನು ಪಡೆದುಕೊಳ್ಳುವ ಮೂಲಕ ನೀವು ಅದನ್ನು ಕೇವಲ ರೂ. 15,299 ಕ್ಕೆ ಖರೀದಿಸಬಹುದು. ಮತ್ತೊಂದೆಡೆ, Samsung M30s ನ 4GB-64GB ವೇರಿಯೆಂಟ್‌ ಬೆಲೆ ರೂ.13,999 ಆಗಿದ್ದರೆ, 6GB+128GB ವೇರಿಯೆಂಟ್‌ ರೂ.16,999 ಬೆಲೆಯಲ್ಲಿ ಲಭ್ಯವಿದೆ. ಬೆಲೆಯ ವಿಷಯದಲ್ಲಿ, ಎರಡೂ ಫೋನ್‌ಗಳ ಬೆಲೆ ಒಂದೇ ಆಗಿರುತ್ತದೆ, ಆದರೆ HONOR 9X ಅದೇ ಬೆಲೆಗೆ ಉತ್ತಮ ವೈಶಿಷ್ಟ್ಯಗಳೊಂದಿಗೆ ಲಭ್ಯವಿದೆ.

ತೀರ್ಪು:

ಎರಡೂ ಫೋನ್‌ಗಳ ಬೆಲೆಯೊಂದಿಗೆ ಅವರ ವೈಶಿಷ್ಟ್ಯಗಳನ್ನು ಹೋಲಿಸಿದಾಗ, HONOR 9X ಉತ್ತಮ ವೈಶಿಷ್ಟ್ಯಗಳನ್ನು ಕಡಿಮೆ ಬೆಲೆಗೆ ನೀಡುತ್ತದೆ. ಇದಲ್ಲದೆ,ಇದು ಈ ಬೆಲೆ ವ್ಯಾಪ್ತಿಯಲ್ಲಿ ಪಾಪ್-ಅಪ್ ಕ್ಯಾಮೆರಾಗಳನ್ನು ನೀಡುವ ಏಕೈಕ ಬ್ರ್ಯಾಂಡ್ ಆಗಿದ್ದು, ಆಫರ್‌ನಿಂದಾಗಿ ಅದು ಇನ್ನೂ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಪ್ರೊಸೆಸರ್ ತುಲನೆ ಮಾಡಿದಾಗ Samsung M30s ನ Exynos 9611 ಗಿಂತ HONOR ನ Kirin 710 ಅನ್ನು ವೇಗವಾದದ್ದು ಮತ್ತು ಉತ್ತಮವೆಂದು ಪರಿಗಣಿಸಬಹುದು. ಇದಲ್ಲದೆ, HONOR 9X ದೀರ್ಘಕಾಲ ನಡೆಯುವ ಬ್ಯಾಟರಿಯನ್ನು ಹೊಂದಿದೆ. ಆದ್ದರಿಂದ ಈ ಎಲ್ಲಾ ವೈಶಿಷ್ಟ್ಯಗಳನ್ನು ಗಮನದಲ್ಲಿಟ್ಟುಕೊಂಡು, ಈ ಸಂದರ್ಭದಲ್ಲಿ HONOR 9X ಸುಲಭವಾದ ಆಯ್ಕೆಯಾಗಿದೆ ಎಂದು ಸ್ಪಷ್ಟವಾಗಿ ಹೇಳಬಹುದು. ಅಂತಹ ಕೈಗೆಟುಕುವ ಬೆಲೆಯಲ್ಲಿ, ಪ್ರತಿಯೊಬ್ಬರೂ ತಮ್ಮ ಕೈಯಲ್ಲಿ ಪಾಪ್-ಅಪ್ ಕ್ಯಾಮೆರಾವನ್ನು ಹೊಂದಲು ಬಯಸುತ್ತಾರೆ ಮತ್ತು ಅದಕ್ಕಾಗಿಯೇ ಈ ಎರಡೂ ಮಾಡೆಲ್‌ಗಳಲ್ಲಿ HONOR 9X ಮೇಲುಗೈ ಹೊಂದಿದೆ.

(ವಿಶೇಷ ಸೂಚನೆ: ಇದು ಪ್ರಾಯೋಜಿತ ವರದಿ)

READ SOURCE
Open UCNews to Read More Articles