UC News

ICC Test Rankings: ಪೂಜಾರ ಹಿಂದಿಕ್ಕಿ ಕೊಹ್ಲಿ ಸನಿಹದತ್ತ ಸ್ಟೀವ್ ಸ್ಮಿತ್

ICC Test Rankings: ಪೂಜಾರ ಹಿಂದಿಕ್ಕಿ ಕೊಹ್ಲಿ ಸನಿಹದತ್ತ ಸ್ಟೀವ್ ಸ್ಮಿತ್

ಬೆಂಗಳೂರು (ಆ. 06): ಸೋಮವಾರವಷ್ಟೆ ಮುಕ್ತಾಯಗೊಂಡ ಆ್ಯಶಸ್ ಸರಣಿಯ ಮೊದಲ ಟೆಸ್ಟ್​ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ ಸ್ಟೀವ್ ಸ್ಮಿತ್ ಐಸಿಸಿ ಟೆಸ್ಟ್​ ರ್ಯಾಂಕಿಂಗ್​ನಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದ್ದಾರೆ.

ಐಸಿಸಿ ಇಂದು ಟೆಸ್ಟ್​ ರ್ಯಾಂಕಿಂಗ್​ನ ನೂತನ ಪಟ್ಟಿ ಬಿಡುಗಡೆಗೊಳಿಸಿದ್ದು, ಇದರಲ್ಲಿ ಸ್ಮಿತ್ 46 ರೇಟಿಂಗ್​ ಅಂಕ ಪಡೆದು ಮೂರನೇ ಸ್ಥಾನಕ್ಕೇರಿದ್ದಾರೆ.

ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಒಂದು ವರ್ಷ ನಿಷೇಧ ಶಿಕ್ಷೆ ಅನುಭವಿಸಿ ಕಮ್​ಬ್ಯಾಕ್ ಮಾಡಿರುವ ಸ್ಮಿತ್ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿ ಸಾಧನೆ ಮಾಡಿದ್ದರು.

ಟೀಂ ಇಂಡಿಯಾದಿಂದ ಪಂತ್ ಔಟ್?; ರಿಷಭ್ ಜಾಗಕ್ಕೆ ಕಾದು ಕುಳಿತಿದ್ದಾರೆ 3 ವಿಕೆಟ್ ಕೀಪರ್ಸ್​​

ಡಾನ್ ಬ್ರಾಡ್ಮನ್ ಬಳಿಕ ಎರಡನೇ ಅತಿ ವೇಗದಲ್ಲಿ 25 ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ಪಾತ್ರವಾಗಿದ್ದರು. ಇದರ ಜೊತೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆಯನ್ನೂ ಮುರಿದಿದ್ದರು.


ಇದೀಗ ಟೆಸ್ಟ್​ ರ್ಯಾಂಕಿಂಗ್​ನಲ್ಲಿ ಸ್ಮಿತ್ ಒಟ್ಟು 903 ಅಂಕ ಪಡೆದು ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್ ಪೂಜಾರ ಅವರನ್ನು ಹಿಂದಿಕ್ಕಿದ್ದಾರೆ. ಇದಕ್ಕೂ ಮುನ್ನ ಪೂಜಾರ 881 ಅಂಕ ಸಂಪಾದಿಸಿದ್ದರೆ, ಸ್ಮಿತ್ 857 ಅಂಕ ಹೊಂದಿದ್ದರು.

ಅಲ್ಲದೆ 922 ಅಂಕದೊಂದಿಗೆ ನಂಬರ್ 1 ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಸನಿಹದತ್ತ ಲಗ್ಗೆಯಿಟ್ಟಿದ್ದಾರೆ. ನ್ಯೂಜಿಲೆಂಡ್​ನ ಕೇನ್ ವಿಲಿಯಮ್ಸನ್ 913 ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

READ SOURCE
Open UCNews to Read More Articles